Round Table India
You Are Reading
ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೩ ಕೊನೆಯ ಭಾಗ
0
Features

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೩ ಕೊನೆಯ ಭಾಗ

Feminism1

 

ಸ್ತ್ರೀವಾದವು ಬ್ರಾಹ್ಮಣವಾದ – ಭಾಗ ೩ – ಕೊನೆಯ ಭಾಗ

ಅನು ರಾಮದಾಸ್

ಇದು ‘ಸ್ತ್ರೀ ವಾದವು ಬ್ರಾಹ್ಮಣವಾದ’ ಎಂಬ ಪ್ರಾಥಮಿಕ ಭಾಷಣದ ಲೇಖನವಾಗಿದೆ

ಸ್ತ್ರೀವಾದವು ಬ್ರಾಹ್ಮಣವಾದ ಎಂದು ಹೇಳುವಲ್ಲಿ ನಾನು ತಪ್ಪಾಗಿದ್ದೇನೆ ಎಂದು ನೋಡಲು ನಾವೆಲ್ಲರೂ ಬಳಸಬೇಕಾದ ಪ್ರಶ್ನೆಗಳು ಈ ಕೆಳಗಿನಂತಿವೆ. ನಿಮಗೆ ಬೇಕಿರುವ ಎಲ್ಲ ಸಾಧನಗಳನ್ನು ಇಟ್ಟಿದ್ದೇನೆ. ಇದನೆಲ್ಲ ಉಪಯೋಗಿಸಿಕೊಂಡು ನೀವು ಹೇಳಬಹುದು – ಏಕೆಂದರೆ ಈ ಪ್ರಶ್ನೆಗಳಿಗೆ ನಿಮ್ಮ ಎಲ್ಲಾ ಉತ್ತರಗಳು ಸಕಾರಾತ್ಮಕ ಅಥವಾ ನಕಾರಾತ್ಮಕವಾಗಿ ಹೊರಬಂದರೂ , ಅಂತಿಮ ಫಲಿತಾಂಶವೆಂದರೆ ಸ್ತ್ರೀವಾದವು ಪ್ರಗತಿಪರವಾಗಿದೆ ಮತ್ತು ಬ್ರಾಹ್ಮಣವಾದವು ಹಿಂದುಳಿದದ್ದಾಗಿದೆ ಮತ್ತು ಎರಡನ್ನೂ ಸಮೀಕರಿಸಲಾಗುವುದಿಲ್ಲ ಎನ್ನುವುದು.

ಸೈದ್ಧಾಂತಿಕವಾಗಿ, ನಾನು ಯಾರನ್ನಾದರೂ ಮನವೊಲಿಸುವಲ್ಲಿ ಯಶಸ್ವಿಯಾದರೂ ಅಥವಾ ಯಾರೂ ನನ್ನೊಂದಿಗೆ ಚರ್ಚೆ ಮಾಡಲು ತಲೆಕೆಡಿಸಿಕೊಳ್ಳದಿರಬಹುದು, ಅವರು ಹೊರಗೆ ಬಂದು ನೀವು ಅಸಂಬದ್ಧ ಮಾತನಾಡುತ್ತಿದ್ದೀರಿ ಎಂದು ಹೇಳದಿರಬಹುದು ಮತ್ತು ಈ ಎಲ್ಲಾ ಪ್ರಶ್ನೆಗಳು ಅವರಿಗೆ ಕ್ಲಿಷ್ಟವಾಗಿರಬಹುದು , ಹೀಗಿರುವುದರಿಂದ ನಾನು ಹೇಳಿರುವುದನ್ನು ಬೆಂಬಲಿಸಲು ದೃಡವಾದ ಸಾಕ್ಷ್ಯಗಳನ್ನು ಒದಗಿಸಬೇಕು.

ಸ್ತ್ರೀವಾದವು ವಿಶ್ವವಿದ್ಯಾನಿಲಯ ಮಟ್ಟದಲ್ಲಿ ಹೊರ ಹೊಮ್ಮುವ ಒಂದು ಉತ್ಪನ್ನವೆಂದು ನಾನು ಹೇಳಿರುವುದರಿಂದ ಇದನ್ನು ವ್ಯಾಪಕ ಸ್ತ್ರೀವಾದಿ ಸಾಹಿತ್ಯದೊಡನೆ ಸಮರ್ಪಿತ ಮನೋಭಾವದಿಂದ ತೊಡಗಿಸಿಕೊಂಡು ನಾನು ಹೇಗೆ ಒಂದು ಸಾಕ್ಷ್ಯವನ್ನು ನಿರ್ಮಿಸಬೇಕು?

ಆದಾಗ್ಯೂ, ಪುಸ್ತಕ ಮಳಿಗೆಗಳು, ಪ್ರಕಾಶಕರು ಮತ್ತು ಗ್ರಂಥಾಲಯಗಳಲ್ಲಿ ಸ್ತ್ರೀವಾದಿ ಪುಸ್ತಕಗಳ ರೂಪದಲ್ಲಿ ವಸ್ತು ಪುರಾವೆಗಳನ್ನು ಪರಿಶೀಲಿಸಬಹುದು. ಮತ್ತು ನಿಖರವಾಗಿ ಅದನ್ನೇ ನಾನು ಮಾಡಿದ್ದೇನೆ. ನಾನು ನಿಮ್ಮೆಲ್ಲರನ್ನೂ ನನ್ನೊಂದಿಗೆ ಪುಸ್ತಕ ಮಳಿಗೆಗೆ ಅಥವಾ ವಿಶ್ವವಿದ್ಯಾಲಯದ ಗ್ರಂಥಾಲಯಕ್ಕೆ ಕರೆದೊಯ್ಯಲು ಸಾಧ್ಯವಿಲ್ಲದ ಕಾರಣ, [ವರ್ಷಗಳಷ್ಟು ಓದು] ನಿಮ್ಮೆಲ್ಲರೊಂದಿಗೆ ಇದನ್ನು ಪರೀಕ್ಷಿಸಲು ನಾನು ಡಿಜಿಟಲ್ ವಿಧಾನಗಳನ್ನು ಬಳಸಿದ್ದೇನೆ. ಒಂದೆರಡು ಮಾರ್ಗಗಳಿಂದ ನಾನು ಇದನ್ನು ಸಾಧಿಸಿದ್ದೇನೆ. ನಾನು ಸ್ತ್ರೀವಾದದ ಬಗ್ಗೆ ಅಧಿಕೃತ ಮೂಲಗಳನ್ನು ತೆಗೆದುಕೊಂಡೆ. ಒಂದು, ಎನ್ಸೈಕ್ಲೋಪೀಡಿಯಾ ಆಫ್ ಫೆಮಿನಿಸ್ಟ್ ಥಿಯರೀಸ್ ಎಂಬ 2013 ರಲ್ಲಿ ಬಂದಂಥ ಬೃಹತ್ ಕೃತಿಯನ್ನು ಆರಿಸಿಕೊಂಡೆ . ಗೂಗಲ್ ಚಿತ್ರಗಳು ಮತ್ತು ಶೋಧನೆಗಳನ್ನು ಬಳಸಿದ್ದೇನೆ. ನಾನು ಪೆಂಗ್ವಿನ್ ಮತ್ತು ವಿಕಿಡಾಟಾದಂತಹ ಪ್ರಮುಖ ಪ್ರಕಾಶನ ಸಂಸ್ಥೆಗಳ ಪಟ್ಟಿಗಳನ್ನು ಸಹ ಬಳಸಿದ್ದೇನೆ.

ನಾನು ಈ ಕೆಳಗಿನ ಮುಖ್ಯಪದಗಳಿಗಾಗಿ ಹುಡುಕಿದೆ: ‘ಸ್ತ್ರೀವಾದಿ ಕ್ಲಾಸಿಕ್ಸ್’ ಮತ್ತು ಫಲಿತಾಂಶಗಳನ್ನು ಹೊರತೆಗೆದು ಡೇಟಾ ಟೇಬಲ್ ರಚಿಸಿದೆ.

ನಾನು ಮಾಡಲು ಹೊರಟಿರುವುದು ಉತ್ಪಾದಿಸಿದ ಡೇಟಾವನ್ನು ಹಂಚಿಕೊಳ್ಳುವುದು. ನಾನು ಅದನ್ನು ಪಿಡಿಎಫ್ ರೂಪದಲ್ಲಿ ಮತ್ತು ಸ್ಪ್ರೆಡ್ ಶೀಟ್ನಲ್ಲಿ ಇಟ್ಟುಕೊಂಡಿದ್ದೇನೆ. ನೀವೆಲ್ಲರೂ ಹೋಗಿ ಅದನ್ನು ಹುಡುಕಬಹುದು. ನಾನು ಕಂಡುಕೊಂಡ ಸಾರಾಂಶ – ಎನ್ಸೈಕ್ಲೋಪೀಡಿಯಾ ಆಫ್ ಫೆಮಿನಿಸ್ಟ್ ಥಿಯರೀಸ್ನಲ್ಲಿ ವಿಶ್ವಕೋಶಕ್ಕೆ ಬರಹ ನೀಡಿದವರ ಪಟ್ಟಿ ಇದೆ. ನೂರಾರು ಮಹಿಳಾ ಬರಹಗಾರರು ಇದ್ದಾರೆ. ನಾನು ಬರಹಗಾರರ ಪಟ್ಟಿಯಿಂದ ಹೆಸರು ಮತ್ತು ಅಂಗಸಂಸ್ಥೆಗಳ ಹೆಸರುಗಳನ್ನು ತೆಗೆದುಕೊಂಡೆ, ಅಂದರೆ ಅವರು ಕೆಲಸ ಮಾಡುತ್ತಿರುವ ವಿಶ್ವವಿದ್ಯಾಲಯ. ಬರಹಗಾರರು ಹಲವಾರು ಪುಟಗಳಲ್ಲಿ ದಾಖಲಾಗುತ್ತಾರೆ. ವಿಶ್ವವಿದ್ಯಾನಿಲಯಗಳ ಅಕ್ಷಾಂಶ ಮತ್ತು ರೇಖಾಂಶದ ಮಾಹಿತಿಯನ್ನು ಉತ್ಪಾದಿಸುವ ಮೂಲಕ ನಾನು ವಿಶ್ವವಿದ್ಯಾಲಯಗಳ ಸ್ಥಳವನ್ನು ನಕ್ಷೆ ಮಾಡಿದ್ದೇನೆ. ತದನಂತರ ನಾನು ಅವುಗಳನ್ನು ಗೂಗಲ್ ನಕ್ಷೆಗಳಲ್ಲಿ ಪ್ಲಗ್ ಮಾಡಿದ್ದೇನೆ ಮತ್ತು ಈ ವಿಶ್ವವಿದ್ಯಾಲಯಗಳು ಎಲ್ಲಿವೆ ಎಂದು ನೋಡಲು ಅದನ್ನು ಪುನರುತ್ಪಾದಿಸಿದೆ.Feminism1

ಸ್ತ್ರೀವಾದವು ಎಲ್ಲ ಮಹಿಳೆಯರ ಬಗ್ಗೆ ಆಗಿದ್ದರೆ, ಸ್ತ್ರೀವಾದಿ ಜ್ಞಾನ ಉತ್ಪಾದನೆಯು ಎಲ್ಲ ಮಹಿಳೆಯರಿಂದ ಬರಬೇಕು, ಈ ಪುಸ್ತಕಗಳು ಅಥವಾ ವಿಶ್ವಕೋಶಕ್ಕೆ ಕೊಡುಗೆ ನೀಡುವವರು ಪ್ರಪಂಚದ ಎಲ್ಲೆಡೆಯಿಂದ ಬಂದಿರಬೇಕು. ಆದ್ದರಿಂದ, ಅದು ವಿಶ್ವವಿದ್ಯಾಲಯದ ಮಟ್ಟದಲ್ಲಿದ್ದರೂ ಅದು ಪ್ರಪಂಚದಾದ್ಯಂತ ಹರಡಿರಬೇಕು. (ಚಿತ್ರ ನೋಡಿ)

ವಿಶ್ವಕೋಶದಿಂದ (ಸ್ತ್ರೀವಾದಿ ಸಿದ್ಧಾಂತಗಳ) ಮತ್ತು ಕೊಡುಗೆದಾರರ ಪಟ್ಟಿಯಿಂದ ಮಾಹಿತಿಯನ್ನು ಹೊರತೆಗೆಯುವ ಈ ವ್ಯಾಯಾಮದಿಂದ ನಾನು ಕಲಿತದ್ದೇನೆಂದರೆ, ಇವೆಲ್ಲವೂ ಬಿಳಿ ದೇಶಗಳಿಂದ ತುಂಬಿತ್ತು. ಹೆಚ್ಚಿನ ಕೊಡುಗೆದಾರರು ಯುಎಸ್, ಯುಕೆ, ಆಸ್ಟ್ರೇಲಿಯಾ ಮತ್ತು ಯುರೋಪಿನಲ್ಲಿದ್ದಾರೆ. ಮತ್ತು ಅವರಲ್ಲಿ ಹೆಚ್ಚಿನವರು ಯು.ಎಸ್. ನವರು.

ಈಗ, ಬರಹಗಾರರ ಹೆಸರುಗಳನ್ನು ನಾನು ನೋಡಿದರೆ, ಅವರು ಬಿಳಿಯ ಅಥವಾ ಕಪ್ಪು ಲೇಖಕರಾಗಿರಬಹುದು. ಇದನ್ನು ಪರಿಶೀಲಿಸಲು ನಾನು ವಿಕಿಡಾಟಾ, ಡಿಬಿಪೀಡಿಯಾ ಮತ್ತು ಗೂಗಲ್ ಶೋದಿಸಿದೆ ಮತ್ತು ನೀವೆಲ್ಲರೂ ಇದೀಗ ಅದನ್ನೇ ಮಾಡಲು ನಾನು ಬಯಸುತ್ತೇನೆ, ಗೂಗಲ್ಗೆ ಹೋಗಿ ಈ ಮುಖ್ಯಪದಗಳನ್ನು ಹುಡುಕಿ ಮತ್ತು ಮೊದಲ ಲಿಂಕ್ ಅನ್ನು ನೋಡಿ.

ಈ ಪದಗಳನ್ನು ನೀವು ನೋಡಬೇಕೆಂದು ನಾನು ಬಯಸುತ್ತೇನೆ – ಸ್ತ್ರೀವಾದಿ ಲೇಖಕರು 19 ನೇ ಶತಮಾನ. ಮೊಟ್ಟಮೊದಲ ಉತ್ತರ – ಚಿತ್ರಗಳ ಒಂದು ಸೆಟ್, ಚಿತ್ರಗಳನ್ನು ಸ್ಕ್ರಾಲ್ ಮಾಡಿ. ಬಾಣದ ಮೇಲೆ ಕ್ಲಿಕ್ ಮಾಡಿ ಮತ್ತು ಅವುಗಳನ್ನು ನೋಡುತ್ತಿರಿ. ಆ ಮಹಿಳೆಯರು ಹೇಗೆ ಕಾಣುತ್ತಾರೆ? ಅವರು ನಿಮಗೆ ಪರಿಚಿತರಾಗಿದ್ದಾರೋ ಇಲ್ಲವೋ? 20 ನೇ ಶತಮಾನದ ಸ್ತ್ರೀವಾದಿ ಸಾಹಿತ್ಯದೊಂದಿಗೆ ಇದನ್ನು ಪುನರಾವರ್ತಿಸಿ. ನೀವು ಇನ್ನೊಂದು ಮುಖ್ಯಪದದೊಂದಿಗೆ ಇದನ್ನು ಮಾಡಬಹುದು – ಸ್ತ್ರೀವಾದಿ ಕ್ಲಾಸಿಕ್ಸ್. ಮತ್ತೆ ನಿಮ್ಮ ಮೊದಲ ಉತ್ತರ ಪುಸ್ತಕಗಳ ಚಿತ್ರಗಳೊಂದಿಗೆ ಇರುತ್ತದೆ. ಆ ಚಿತ್ರಗಳನ್ನು ಸ್ಕ್ರಾಲ್ ಮಾಡಿ ಮತ್ತು ಅದರ ಬಗ್ಗೆ ನಿಮ್ಮ ಮನಸ್ಸಿನಲ್ಲಿ ಏನು ನೋಂದಾಯಿಸುತ್ತದೆ ಎಂಬುದನ್ನು ನೋಡಿ. ನಂತರ ಭಾರತೀಯ ಸ್ತ್ರೀವಾದಿ ಮುಖ್ಯಪದದೊಂದಿಗೆ ಪ್ರಕ್ರಿಯೆಯನ್ನು ಪುನರಾವರ್ತಿಸಿ, ಚಿತ್ರಗಳ ಮೂಲಕ ಸ್ಕ್ರಾಲ್ ಮಾಡಿ. ಭಾರತೀಯ ಸ್ತ್ರೀವಾದಿ ಕ್ಲಾಸಿಕ್ನಿಂದ ಪ್ರಕ್ರಿಯೆಯನ್ನು ಪುನರಾವರ್ತಿಸಿ. ಯಾರಾದರೂ ಅದನ್ನು ಮಾಡಲು ಮತ್ತು ಅವರು ಕಂಡದ್ದನ್ನು ಹಂಚಿಕೊಳ್ಳಲು ಬಯಸುವಿರಾ?

ಗೌರವ್: ನಾವಿರುವ ಸ್ಥಳ ಆಧರಿಸಿ ಉತ್ತರ ವಿಭಿನ್ನವಾಗಿರುತ್ತದೆ. ಆದ್ದರಿಂದ ನಾವು ನೋಡುವುದು ನಿಮ್ಮ ಯುಎಸ್ ಸರ್ವರ್ನಿಂದ ಭಿನ್ನವಾಗಿರುತ್ತದೆ.

ಅನು: ಗೌರವ್, ನಮ್ಮ ಸ್ಥಳವನ್ನು ಆಧರಿಸಿ ನಾವು ವಿಭಿನ್ನ ಚಿತ್ರಗಳ ಗುಂಪನ್ನು ಪಡೆಯಲಿದ್ದೇವೆ ಎಂದು ನೀವು ಮಾಡಿದ ಅಂಶ, ನಾವು ಅವೆಲ್ಲವನ್ನೂ ನೋಡೋಣ. ಸ್ತ್ರೀವಾದಿ ಲೇಖಕರ ವೈವಿಧ್ಯತೆ ಏನೆಂದು ನೋಡಲು ಅದು ನಮಗೆ ದತ್ತಾಂಶವಾಗಿದೆ.

ಅವರ ವರ್ಗ, ಜಾತಿ,ಸ್ಥಳ, ಅವರ ಜನಾಂಗದ ಸ್ಥಳ ತಕ್ಷಣವೇ ಸ್ಪಷ್ಟವಾಗುತ್ತದೆ. ಮತ್ತು ನಮ್ಮ ಹಕ್ಕುಗಳ ಬಗ್ಗೆ ಮಾತನಾಡಬೇಕಾದ ಜನರು ಇವರು.

ಶೀರ್ಷಿಕೆಗಳನ್ನು ಮತ್ತು ಲೇಖಕರ ಹೆಸರುಗಳನ್ನು ನೋಡಿ. ನನ್ನ ತುದಿಯಿಂದ, ಕನಿಷ್ಠ ನಾನು ನೋಡುವ ರೀತಿ, ಅದು ಪಕ್ಷಪಾತವಾ ಗಿರಬಹುದು ಏಕೆಂದರೆ ಅದು ವಸ್ತುನಿಷ್ಠವಾಗಿದೆ, ನಾನು ಚಿತ್ರಗಳನ್ನು ನೋಡುತ್ತ ಹೇಳುತ್ತಿದ್ದೇನೆ ಸರಿ, ಇವರೆಲ್ಲರೂ ಬಿಳಿ ಮಹಿಳೆಯರು. ಅವರಿಗೂ ನನಗೂ ಯಾವುದೇ ಪ್ರಸ್ತುತತೆ ಇಲ್ಲ. ಮತ್ತು ಈ ಎಲ್ಲ ವಿಷಯಗಳು ಅವರು ಮಾತನಾಡಬೇಕಾದ ಹಕ್ಕುಗಳ ಬಗ್ಗೆ ಮಾತನಾಡುತ್ತಿಲ್ಲ.Feminist classics

ನಾನು ಬರಹಗಾರರ ಗುಂಪಿನ ಪಟ್ಟಿಯನ್ನು ರಚಿಸಿದಾಗ, ಪುಸ್ತಕಗಳ ಪಟ್ಟಿಯನ್ನು ಸಹ ರಚಿಸಿದೆ. ವಿಕಿ ದತ್ತಾಂಶವು ಕಾಲಾನುಕ್ರಮದಲ್ಲಿ ಸಂಘಟಿತವಾದ ಸ್ತ್ರೀವಾದಿ ಪುಸ್ತಕಗಳ ಸಂಪೂರ್ಣ ಪಟ್ಟಿಯನ್ನು ಹೊಂದಿದೆ, ಅವುಗಳು ಪ್ರಕಟವಾದ ವರ್ಷದ ಜೊತೆಗೆ. ಆದ್ದರಿಂದ ಇಲ್ಲಿ ನಾನು 15 ನೇ ಶತಮಾನದಿಂದ ಸ್ತ್ರೀವಾದಿ ಪುಸ್ತಕಗಳ ಪಟ್ಟಿಯನ್ನು ಹುಡುಕಲು ಹೊರಡುತ್ತೇನೆ, ನಾನು ಹಕ್ಕುಗಳ ಬಗ್ಗೆ ಹುಡುಕುತ್ತೇನೆ. ನಾನು ಆಹಾರಕ್ಕಾಗಿ ನೋಡುತ್ತೇನೆ, ನೀರಿಗಾಗಿ ನೋಡುತ್ತೇನೆ. ಇವು ಮಹಿಳೆಯರ ಹಕ್ಕುಗಳು. ನಾನು ಹುಡುಕುತ್ತಿರುವಾಗ ಒಂದಿಷ್ಟೂ, ಅದರಲ್ಲಿ ಯಾವುದಕ್ಕೂ ಪ್ರತಿಕ್ರಿಯೆ ಇರುವುದಿಲ್ಲ. ನಾನು ಲೈಂಗಿಕತೆಯ, ಧರ್ಮದ ಬಗ್ಗೆ ಮಾತನಾಡುವ ಬಹಳಷ್ಟು ಪುಸ್ತಕಗಳನ್ನು ಪಟ್ಟಿ ಮಾಡಬಹುದು , ಸ್ತ್ರೀವಾದಿ ಜ್ಞಾನ ಉತ್ಪಾದನೆ, ದೇಶ, ಅಧಿಕಾರ, ಕಾರ್ಪೊರೇಟ್ ಸಂಸ್ಥೆಗಳಲ್ಲಿ ಸ್ಥಾನಮಾನ ಇತ್ಯಾದಿಗಳ ಬಗ್ಗೆ ಬರೆದದ್ದಾಗಿದೆ. ನಾನು ಆ ಎಲ್ಲವನ್ನು ಕಾಣಬಹುದು. ನನ್ನ ಹಕ್ಕುಗಳು ಎಲ್ಲಿವೆ? ಮತದಾನದ ಹಕ್ಕುಗಳ ಬಗ್ಗೆ ನೂರಾರು ಪುಸ್ತಕಗಳಿವೆ. ಅದು ನನಗೆ ಅಥವಾ ನನ್ನ ಸಮಾಜಕ್ಕೆ ಪ್ರಯೋಜನವಿಲ್ಲ. ಆ ಹಕ್ಕುಗಳನ್ನು ನಮಗೆ ನೀಡಲಾಯಿತು. ನಮ್ಮ ಸಂಸ್ಥಾಪಕ ಪಿತಾಮಹರು, ಸಂವಿಧಾನವನ್ನು ರೂಪಿಸಿದವರು, ನಮಗೆ ಆ ಹಕ್ಕುಗಳನ್ನು ಖಾತರಿಪಡಿಸಿದರು. ಇಲ್ಲಿ ನಮಗೆ ಆ ಹಕ್ಕುಗಳನ್ನು ಯಾವುದೇ ಸ್ತ್ರೀವಾದಿ ಚಳುವಳಿ ಕೊಡಿಸಲಿಲ್ಲ. ಹಾಗಾಗಿ ಈ ಪ್ರಗತಿಪರ ಸಿದ್ಧಾಂತದ ಹಕ್ಕುಗಳು ಅಥವಾ ಪುಸ್ತಕಗಳು ಅಥವಾ ಜ್ಞಾನ ಹೇಗೆ ನೀರಿನ ಪರಿಸ್ಥಿತಿಯನ್ನು ಸುಧಾರಿಸ ಲು ನನಗೆ ತಿಳಿಸುತ್ತದೆ ಎಂದು ಇನ್ನೂ ನಾನು ಹುಡುಕುತ್ತಿದ್ದೇನೆ.

ಪ್ರಪಂಚದ ಬಹಳಷ್ಟು ಭಾಗಗಳಲ್ಲಿ ಮಹಿಳೆಯರು ತಮ್ಮ ಹೆಚ್ಚಿನ ಸಮಯವನ್ನು ನೀರನ್ನು ಹುಡುಕಲು, ತರಲು, ಸಂಗ್ರಹಿಸಲು ವ್ಯಯಿಸುತ್ತಿರುವಾಗ ಇದನ್ನು ತಡೆಯಲು ಈ ಸ್ತ್ರೀವಾದಿಗಳು ಏನು ಮಾಡಿದ್ದಾರೆಂದು ಸ್ಪಷ್ಟಪಡಿಸಿದ್ದಾರ? ಅಥವಾ ಸುರಕ್ಷಿತ ಶಿಶುಪಾಲನಾ ಬಗ್ಗೆ, ಅವರ ಉದ್ಯೋಗಗಳು ಬಿಳಿ ಕಾಲರ್ ಉದ್ಯೋಗಗಳಲ್ಲದಿದ್ದಾಗ. ವಿಶ್ವದ ಬಹುಪಾಲು ಮಹಿಳೆಯರು ಕೃಷಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಹಾಗಾದರೆ ಕೃಷಿ ಕಾರ್ಮಿಕರಿಗೆ ಶಿಶುಪಾಲನೆ ಹೇಗಿದೆ? ಮತ್ತು ಸ್ತ್ರೀವಾದವು ಅದರ ಬಗ್ಗೆ ಏನು ಹೇಳಿದೆ? ಈ ಎಲ್ಲಾ ನೂರಾರು ಮತ್ತು ನೂರಾರು ಪುಸ್ತಕಗಳಲ್ಲಿ… 1970 ರಲ್ಲಿ.. ಆ ಎಕ್ಸೆಲ್ ಹಾಳೆಯನ್ನು ನೋಡಿದರೆ 370 ಪುಸ್ತಕಗಳಿವೆ ಎಂದುಕೊಳ್ಳುತ್ತೇನೆ ನಾನು ಹುಡುಕುತ್ತಿರುವ ವಿಷಯಗಳು ಯಾವೂದೂ ಇಲ್ಲ. ಎಲ್ಲಾ ವಿಷಯಗಳನ್ನು ಮರೆತುಬಿಡಿ, ನಾನು ದೇಶಗಳನ್ನು ಹುಡುಕುತ್ತಿದ್ದೆ. ಈ ಪುಸ್ತಕಗಳಲ್ಲಿ ಯಾವ ಶೇಕಡಾವಾರು ವಿವಿಧ ದೇಶಗಳಲ್ಲಿನ ಮಹಿಳೆಯರಿಗೆ ಸಂಬಂಧಿಸಿದೆ? ಅರ್ಥಮಾಡಿಕೊಳ್ಳುವ ಪ್ರಯತ್ನದಲ್ಲಿ, ಈ ಸ್ತ್ರೀವಾದಿ ಚಿಂತಕರು, ಈ ಮಹಾನ್ ಕಾರ್ಯಕರ್ತರು ಮತ್ತು ಮಹಿಳೆಯರಿಗಾಗಿ ಜೀವನ ತ್ಯಾಗ ಮಾಡಿದವರು, ನನ್ನ ಬಗ್ಗೆ ತಿಳಿದಿದ್ದಾರೆಯೇ, ನನ್ನ ಸಮಾಜ ಮತ್ತು ದೇಶದ ಬಗ್ಗೆ ತಿಳಿದಿದ್ದಾರೆಯೇ? ಅವರು ಅದರ ಬಗ್ಗೆ ಯೋಚಿಸಿದ್ದಾರೆಯೇ? ಅದಕ್ಕಾಗಿ ಅವರು ಎಷ್ಟು ಕೆಲಸ ಮಾಡಿದರು? ಇದು ಅವರ ಪುಸ್ತಕಗಳಲ್ಲಿ ಎಲ್ಲೋ ಕಾಣಿಸಬೇಕು.

ಸಾಕಷ್ಟು ದೇಶಗಳಿಲ್ಲ. ಇಡೀ ಖಂಡಗಳು ಸ್ತ್ರೀವಾದಿ ಸಾಹಿತ್ಯದ ವಿಶ್ವಕೋಶ ಸಂಗ್ರಹದಲ್ಲಿ ಅಥವಾ ಕನಿಷ್ಠ ವಿಷಯಗಳ ಮಟ್ಟದಲ್ಲಿ ಗೋಚರಿಸುವುದಿಲ್ಲ.

ಆದ್ದರಿಂದ, ಒಂದೆರಡು ವಿಷಯಗಳಿವೆ. ಕೇವಲ ಸ್ತ್ರೀವಾದಿ ಲೇಖಕರ ಚಿತ್ರಗಳನ್ನು ನೋಡುವ, ಪುಸ್ತಕಗಳ ಬಗ್ಗೆ ಮೆಟಾಡೇಟಾವನ್ನು ಬಳಸಿಕೊಂಡು, ಡಿಬಿಪೀಡಿಯಾದಂತಹ ಸ್ಥಳಗಳಿಂದ, ಆ ಮಾಹಿತಿಯನ್ನು ಯಾರು ಹಾಕಿದರು ಮತ್ತು ಆ ಮಾಹಿತಿಯನ್ನು ಸಂಗ್ರಹಿಸಲು ಅವರು ಯಾವ ಮಟ್ಟದ ಕಠಿಣತೆಯನ್ನು ಬಳಸಿದ್ದಾರೆ ಎಂಬುದು ಸ್ಪಷ್ಟವಾಗಿಲ್ಲ ವಿಶ್ವಕೋಶವನ್ನು ಹೊರತರಲು ಶೈಕ್ಷಣಿಕ ಕಠಿಣತೆಯನ್ನು ಅನುಸರಿಸಬೇಕಿರುತ್ತದೆ . ವಿಭಿನ್ನ ಹಂತದ ಪುರಾವೆಗಳನ್ನು ಬಳಸಿಕೊಂಡು, ನನ್ನ ಸಮಾಜದ ಪ್ರತಿಬಿಂಬಗಳು, ನನ್ನ ಹೋರಾಟಗಳು, ನನ್ನ ವಿಜಯಗಳನ್ನು ನಾನು ನೋಡಬಹು ದೆಂದುಕೊಂಡೆ. ಆದರೆ ನನಗೆ ಇದಾವುದೂ ಸಿಗಲಿಲ್ಲ.

ಆದ್ದರಿಂದ, ನನ್ನ ತೀರ್ಮಾನವೆಂದರೆ ಇದು ಆಳುವ ವರ್ಗದ ಮಹಿಳೆಯರ ಬಗ್ಗೆ, ಅದರಲ್ಲಿ 99% ಬಿಳಿ ಮಹಿಳೆಯರ ಹೋರಾಟ. ಅವರ ಹೋರಾಟ ಯಾರಿಗೆ ಸಮನಾಗಬೇಕೆಂದು? ಅವರು ಕಪ್ಪು ಮನುಷ್ಯ ಅಥವಾ ಏಷ್ಯನ್ ಮನುಷ್ಯನಿಗೆ ಸಮಾನರಾಗಲು ಹೋರಾಡುತ್ತಿದ್ದಾರಾ? ಇಲ್ಲ! ಅವರು ಬಿಳಿ ಮನುಷ್ಯನಿಗೆ ಸಮಾನರಾಗಲು ಹೋರಾಡುತ್ತಿದ್ದಾರೆ. ಅವರ ಹೋರಾಟ, ಒಂದು ವಾಕ್ಯದಲ್ಲಿ, ನಾನು ಹೇಳಬೇಕಾದರೆ: ಸ್ತ್ರೀವಾದವು ಬಿಳಿ ಪುರುಷರಿಗೆ ಸಮಾನವಾಗಲು ಬಿಳಿ ಮಹಿಳೆಯರ ಹೋರಾಟ. ಬಿಳಿ ಪುರುಷರು, ಪುರುಷರು ಮತ್ತು ಮಹಿಳೆಯರು ಒಟ್ಟಾಗಿ, ಇಡೀ ಪ್ರಪಂಚದ ದಬ್ಬಾಳಿಕೆಗಾರರಾಗಿದ್ದಾರೆ ಪ್ರಪಂಚದ ಉಳಿದ ಭಾಗಗಳನ್ನು ದಬ್ಬಾಳಿಕೆ ಮಾಡುವ ಬಿಳಿ ಪುರುಷರಿಗೆ ಸಮಾನರಾಗಲು ಬಿಳಿ ಮಹಿಳೆಯರು ನಡೆಸುತ್ತಿರುವ ಹೋರಾಟವನ್ನು ಗೆಲ್ಲಲು ಸಹಾಯ ಮಾಡಬೇಕೆಂದು ಎಲ್ಲ ಮಹಿಳೆಯರಿಗೆ ಸ್ತ್ರೀವಾದವು ಒತ್ತಾಯಿಸುತ್ತದೆ. ಮತ್ತು ಇದು ಪ್ರತಿ ಸಮಾಜದಲ್ಲೂ ಪುನರಾವರ್ತನೆಯಾಗುತ್ತದೆ. ಆ ಸಮಾಜದ ಗಣ್ಯರು ನಾವು ಎಲ್ಲ ಮಹಿಳೆಯರಿಗಾಗಿ ಹೋರಾಡುತ್ತಿದ್ದೇವೆ ಎನ್ನುತ್ತಾ ಈ ಸಿದ್ಧಾಂತವನ್ನುಅಳವಡಿಸಿಕೊಳ್ಳುತ್ತಾರೆ, ಆದರೆ ಅವರ ಹೋರಾಟ ತಮ್ಮ ವರ್ಗದ ಪುರುಷರಿಗೆ ಸಮನಾಗಲು. ಆದರೆ ಈ ಕರ್ತವ್ಯ ನಿರ್ವಹಿಸಲು ಎಲ್ಲಾ ಮಹಿಳೆಯರನ್ನು ನೇಮಿಸಿಕೊಳ್ಳಲಾಗುತ್ತದೆ. ಹಾಗಾಗಿ ಅವರ ಸಾಧನೆಗಳನ್ನು, ಯಶಸ್ಸನ್ನು ನಾನು, ಎಲ್ಲಾ ಮಹಿಳೆಯರ ಹಕ್ಕುಗಳ ಯೋಧರಾಗಿ ನೋಡಲಾರೆ ಏಕೆಂದರೆ ನೀರಿನ ಸಮಸ್ಯೆ ಇನ್ನು ಬದಲಾಗಿಲ್ಲ. ಅದು ಅವರ ಕಕ್ಷೆಯಲ್ಲೂ ಇಲ್ಲ. ಆದ್ದರಿಂದ, ಸ್ತ್ರೀವಾದವನ್ನು ಪುರುಷರು ಮತ್ತು ಮಹಿಳೆಯರು ತೊಡಗಿಸಿಕೊಂಡಿರುವ ಅಂಚಿನಲ್ಲಿರುವ ಜನರ ಎಲ್ಲಾ ಐತಿಹಾಸಿಕ ಹೋರಾಟಗಳಿಗೆ ವಿರೋಧವೆಂದು ನಾನು ನೋಡಲಾರಂಭಿಸಿದೆ. ಉದಾಹರಣೆಗೆ, ಜಾತಿ ವಿರೋಧಿ ಯುದ್ಧಗಳು ಮತ್ತು ಹೋರಾಟಗಳು.

ಈಗ ಬಿಳಿ ಪುರುಷರು ಮತ್ತು ಬಿಳಿ ಮಹಿಳೆಯರು ಸಹಭಾಗಿತ್ವದಲ್ಲಿ ವಿಷಯಗಳನ್ನು ಒಳ್ಳೆಯದೋ ಅಥವಾ ಕೆಟ್ಟದೋ ಮಾಡಲು ಹೊರಟಿದ್ದಾರೆ, ನನಗೆ ಗೊತ್ತಿಲ್ಲ. ಆದರೆ ನನಗೆ ತಿಳಿದಿರುವ ಒಂದು ವಿಷಯವೆಂದರೆ ಅವರು ಎಂದಿಗೂ ನನ್ನ ಯೋಗಕ್ಷೇಮವನ್ನು ಅವರ ಮುಖ್ಯ ಗುರಿಯಾಗಿ ಹೊಂದಿರಲಿಲ್ಲ. ಆದ್ದರಿಂದ, ಸಮಾನತೆಗಾಗಿ ಹೋರಾಡುತ್ತಿರುವ ಎಲ್ಲಾ ಚಳುವಳಿಗಳು ಸ್ತ್ರೀವಾದದ ಫಲಾನುಭವಿಗಳಾಗಲು ಸಾಧ್ಯವಿಲ್ಲ, ಅವನ್ನು ಈ ವರ್ಗ ಬಳಸಿಕೊಳ್ಳಬಹುದು ಮಾತ್ರ ಏಕೆಂದರೆ ಅದು ಆ ರೀತಿಯಲ್ಲಿ ರಚನೆಯಾಗಿದೆ.

ಸ್ತ್ರೀವಾದವು ನೈತಿಕ ಚಳುವಳಿ ಎಂಬ ವ್ಯಾಪಕವಾದ ಗ್ರಹಿಕೆಯನ್ನು ಹೇಗೆ ಪಡೆದುಕೊಂಡಿದೆ , ಯಾವುದು ಸರಿ ಅಥವಾ ತಪ್ಪು ಎಂದು ನಿಮಗೆ ಹೇಳುವ ನೈತಿಕ ಅಧಿಕಾರವನ್ನು ಹೊಂದಿದೆ ಮತ್ತು ನಿಮ್ಮ ಚಟುವಟಿಕೆಗಳನ್ನು ನೀವು ಹೇಗೆ ಸರಿಪಡಿಸಬೇಕು, ನೀವು ನಡವಳಿಕೆಗಳನ್ನು ಹೇಗೆ ಬದಲಾಯಿಸಬೇಕು, ರಚನೆಗಳನ್ನು ಬದಲಾಯಿಸಬೇಕು ಮತ್ತು ಹೀಗೆ . ಅದು ಹೇಗೆ ನೈತಿಕ ಅನುಮತಿಯನ್ನು ಪಡೆಯಿತು? ಆ ಮನವಿ ಎಲ್ಲಿಂದ ಬರುತ್ತಿದೆ ಮತ್ತು ಅದು ಆ ಸ್ಥಾನವನ್ನು ಗಳಿಸಿದೆ ಎಂಬುದಕ್ಕೆ ಪುರಾವೆ ಏನು? ನಾನು ಮಾಡುತ್ತಿರುವುದು ಸರಿಯಿಲ್ಲ ಬದಲಾಯಿಸಬೇಕು ಎಂದು ಹೇಳುವ ಹಕ್ಕು ನೀವು ಗಳಿಸಿದ್ದೀರಾ ಎಂದು ಹೇಳಲು ಅದು ನನಗೆ ಏನು ಮಾಡಿದೆ?

ಸಂಪನ್ಮೂಲದ ಮಟ್ಟದಲ್ಲಿ ಕೆಲವು ಸನ್ನಿವೇಶಗಳನ್ನು ಬದಲಿಸುವ ಮೂಲಕ, ನಮ್ಮವರೆಲ್ಲರೂ ಎಲ್ಲ ಮಹಿಳೆಯರಿಗೂ ಸಮಾನರಾಗಬೇಕೆಂಬ ಉದ್ದೇಶವನ್ನು ಹೊಂದಿಲ್ಲವೆನ್ನುವ ಅಂಶವನ್ನು ಹೊರತುಪಡಿಸಿ, ದಲಿತ ಪುರುಷ ಅಥವಾ ದಲಿತ ಮಹಿಳೆಗೆ ಬ್ರಾಹ್ಮಣವಾದ ಏನು ಮಾಡುತ್ತದೆ? ಅದು ಅವರನ್ನು ಹೊರಗಿನವರಂತೆ ಪರಿಗಣಿಸುತ್ತದೆ. ಬ್ರಾಹ್ಮಣವಾದ ಅಥವಾ ಯಾವುದೇ ಮೇಲರಿಮೆ ಪ್ರಾಬಲ್ಯವಾದಿ ಸಂಸ್ಕೃತಿಯು ಬೇರೆಲ್ಲರನ್ನೊ ಕೀಳಾಗಿ, ಬೇಕಿಲ್ಲದಂತೆ , ಕೆಟ್ಟದ್ದು ಮತ್ತು ಅವಮಾನಕ್ಕೆ ಅರ್ಹವಾದದ್ದು, ಹಕ್ಕುಗಳಿಂದ ವಂಚಿತರಾಗಲು ಯೋಗ್ಯವಾದದ್ದು ಎಂದು ಪರಿಗಣಿಸುತ್ತದೆ. ಅದು ಶಿಕ್ಷಿಸುವ ಹಕ್ಕನ್ನು ತಾನೇ ತೆಗೆದುಕೊಳ್ಳುತ್ತದೆ. ಸ್ತ್ರೀವಾದವು ಶಿಕ್ಷಿಸುವ ಹಕ್ಕನ್ನು ತಾನೇ ತೆಗೆದುಕೊಂಡಿದೆ. ಬ್ರಾಹ್ಮಣವಾದದ ಯೋಜನೆಯಲ್ಲಿ ದಲಿತ ವ್ಯಕ್ತಿ ಯಾರು? ಅವನು ದ್ವೇಷಿಸಬೇಕಾದ ವ್ಯಕ್ತಿ, ಅವನು ಹಿಂಸಾತ್ಮಕ – ಇದು ದ್ವೇಷದ ವಸ್ತುವಾಗಿ ಅವನ ಐತಿಹಾಸಿಕ ವಿವರಣೆಯಾಗಿದೆ. ಅವನು ಶಿಕ್ಷೆಗೆ ಅರ್ಹನು. ಅದನ್ನೇ ಬ್ರಾಹ್ಮಣವಾದ ಹೇಳುತ್ತದೆ. ಆದರೆ ಜಾತಿ ವಿರೋಧಿ ಆಂದೋಲನವು ಹೋರಾಡಿ ಹೇಳಿದೆ – ಇಲ್ಲ ಇದು ತಪ್ಪು – ಮತ್ತು ಈಗ ಸಾಮಾನ್ಯ ತಿಳುವಳಿಕೆ ಇದೆ ದಲಿತರನ್ನು ದ್ವೇಷದ ವಸ್ತು ಎಂದು ಬ್ರಾಹ್ಮಣವಾದವು ಹೇಳಿದಾಗ, ಅದರಲ್ಲಿ ಅವಮಾನವಿದೆ ಮತ್ತು ಇಲ್ಲ ಎಂದು ಹೇಳಲು ಕಾನೂನು ಕ್ರಮಗಳಿವೆ, ನೀವು ಹಾಗೆ ಹೇಳುವಂತಿಲ್ಲ. ಸ್ತ್ರೀವಾದವು ಬ್ರಾಹ್ಮಣವಾದದಂತೆಯೇ ಇದನ್ನು ಸಮರ್ಥವಾಗಿ ಮಾಡಲು ಸಾಧ್ಯವಾಗಿದೆ . ಅದು ಈ ರೀತಿ ಹೇಳಲು ಸಾಧ್ಯವಾಗಿದೆ – ದಲಿತ ಮನುಷ್ಯ ದ್ವೇಷದ ವಸ್ತು ಮತ್ತು ಅದು ಅವಮಾನಕ್ಕೀಡಾಗುವುದಿಲ್ಲ. ಸ್ತ್ರೀವಾದವು ಬ್ರಾಹ್ಮಣವಾದವು ಹೇಳುತ್ತಿದ್ದನ್ನೇ ನಿಖರವಾಗಿ ಮತ್ತು ಬಹಿರಂಗವಾಗಿ ಹೇಳುವ ನೈತಿಕ ಹಕ್ಕನ್ನು ಪಡೆದಿದೆ ಎಂದು ತೋರುತ್ತದೆ. ಅದು ಕೇವಲ ಹೇಳುತ್ತಿಲ್ಲ. ನೀವು ಯಾರನ್ನಾದರೂ ದ್ವೇಷದ ವಸ್ತು ಎಂದು ವಿವರಿಸಿದ ನಂತರ ನೀವು ಅವರ ಹಕ್ಕುಗಳು ಮತ್ತು ವಸ್ತು ಸಂಪನ್ಮೂಲಗಳನ್ನು ಮತ್ತು ಎಲ್ಲವನ್ನು ಕಸಿದುಕೊಳ್ಳಬಹುದು. ಈ ಅರ್ಥದಲ್ಲಿ ಭಾರತೀಯ ಸ್ತ್ರೀವಾದವು ದಲಿತ ಪಿತೃಪ್ರಭುತ್ವ ಉತ್ಪಾದಿಸಿತು ಎಂಬ ಅಂಶವು ಅಲ್ಲಿ ಈ ಪುರುಷರ ಗುಂಪು ಮತ್ತು ಈ ಪುರುಷರ ಗುಂಪು ಮಾತ್ರ ಹಿಂಸಾತ್ಮಕ ಮತ್ತು ಬ್ರಾಹ್ಮಣ ಪುರುಷರಲ್ಲ ಮತ್ತು ಅವರಿಗೆ ಶಿಕ್ಷೆಯಾಗಬೇಕು, ಸರಿಪಡಿಸಬೇಕು, ಸುಧಾರಣೆಯಾಗಬೇಕು, ಬ್ರಾಹ್ಮಣವಾದ ಹೇಳಿದ್ದಕ್ಕಿಂತಲೂ, ಮಾಡಿದ್ದಕಿಂತಲೂ ಭಿನ್ನವಾಗಿದೆ ಹೇಗೆ?

ಯುಎಸ್ ನಂತ ಜನಾಂಗೀಯ ಸಮಾಜದಲ್ಲಿ, ನಿಖರವಾಗಿ ಇದನ್ನೇ ಮಾಡಿರುವುದು. ಕಪ್ಪು ಮನುಷ್ಯನು ಇಂದಿನವರೆಗೂ ದ್ವೇಷದ ವಸ್ತುವಾಗಿದ್ದಾನೆ ಮತ್ತು ಸ್ತ್ರೀವಾದಿ ಚಾಲಿತ ನೀತಿಗಳ ಎಲ್ಲಾ ತಳಮಟ್ಟದ ಪರಿಣಾಮಗಳು ತೀರಾ ಕಡಿಮೆ ತಲುಪಿರುವಂಥವನಾಗಿದ್ದಾನೆ . ಅವರು ಹೆಚ್ಚು ಸೆರೆವಾಸಕ್ಕೊಳಗಾಗುತ್ತಿರುವ ಜನರು. ಆದ್ದರಿಂದ, ಇದು ಜನಾಂಗ-ಕೇಂದ್ರಿತ ಸಮಾಜದಲ್ಲಿರಲಿ ಅಥವಾ ಜಾತಿ ಕೇಂದ್ರಿತ ಸಮಾಜದಲ್ಲಿರಲಿ, ಎಲ್ಲೆಲ್ಲಿ ಶ್ರೇಣೀಕರಣವಿರುತ್ತದೋ, ಸ್ತ್ರೀವಾದವು ಹಿಂದಿನ ಆಧಿಪತ್ಯದ ವ್ಯವಸ್ಥೆಗಳು ಶೋಷಿತರಿಗೆ ಏನು ಮಾಡುತ್ತಿದ್ದವು ಅದೇ ಮಾಡುತ್ತದೆ. ಒಂದೇ ವ್ಯತ್ಯಾಸವೆಂದರೆ, ಸ್ತ್ರೀವಾದಕ್ಕೆ ಅದನ್ನು ಮಾಡಲು ನೈತಿಕ ಹಕ್ಕು ಇರುವಂತಿದೆ. ಮತ್ತು ಆ ನೈತಿಕ ಹಕ್ಕು ಎಲ್ಲಿಂದ ಬಂದಿದೆ? ಇದು ಎಲ್ಲ ಮಹಿಳೆಯರ ಹಕ್ಕುಗಳ ಕುರಿತಾಗಿರುವುದರಿಂದ ಅಂಚಿನಲ್ಲಿರುವವರ ಭಾಗವಹಿಸುವಿಕೆಯಿಂದ ಬರುತ್ತಿದೆಯೇ, ಆದ್ದರಿಂದ ನಾವು ಸ್ತ್ರೀವಾದಕ್ಕೆ ನೈತಿಕ ಹಕ್ಕನ್ನು ನೀಡುತ್ತಿದ್ದೇವೆ? ಬ್ರಾಹ್ಮಣವಾದವನ್ನು ಒಳಗೊಂಡಂತೆ ಮೇಲರಿಮೆ ಪ್ರಾಬಲ್ಯವನ್ನು ಪ್ರಚಾರ ಮಾಡುವ ಎಲ್ಲಾ ನಂಬಿಕೆ ವ್ಯವಸ್ಥೆಗಳಂತೆಯೇ ಕಾರ್ಯನಿರ್ವಹಿಸಲು ನಾವು ಅದನ್ನು ಬಿಟ್ಟಿದ್ದೇವೆ . ನಾನು ಅದನ್ನು ಹೀಗೆ ಅರ್ಥಮಾಡಿಕೊಂಡಿದ್ದೇನೆ ಮತ್ತು ಸ್ತ್ರೀವಾದಿಗಳು – ಇಲ್ಲ ನೀವು ತಪ್ಪು, ಇದು ನಾವು ಮಾಡಿಲ್ಲ, ನಾವು ಎಲ್ಲ ಮಹಿಳೆಯರಿಗೆ ಸಮಾನತೆಯನ್ನು ಪಡೆಯಲು ಕೆಲಸ ಮಾಡಿದ್ದೇವೆ, ಎಲ್ಲಾ ಮಹಿಳೆಯರಿಗೆ ವಸ್ತು ಸ್ಥಿತಿ ಈಗ ಬದಲಾಗಿದೆ ಎಂದು ಹೇಳಿದರೆ ಪುರಾವೆಗಳನ್ನು ನೋಡಬೇಕಾಗುತ್ತದೆ – ಆಳುವ ವರ್ಗದ ಸ್ತ್ರೀವಾದಿಗಳು ಭೌತಿಕ ಸಂಪನ್ಮೂಲಗಳ ಮೇಲಿನ ಹಿಡಿತವನ್ನು ಬಿಟ್ಟುಕೊಟ್ಟಿದ್ದಾರೆ ಮತ್ತು ಸೆರೆವಾಸ ಅಥವಾ ಶಿಕ್ಷಾರ್ಹ ಕಾನೂನುಗಳ ನಿಯೋಜನೆಯು ಈಗ ಎಲ್ಲರಿಗು ಇದೆ ಮತ್ತು ಕೇವಲ ಒಂದು ಗುಂಪಿಗೆ ಮಾತ್ರವಲ್ಲ. ಹಾಗಿದ್ದರೆ ಅವರು ನನಗೆ ಆ ಪುರಾವೆ ತೋರಿಸಬೇಕಾಗಿದೆ.

ಇಂದು, ನಾನು ನೋಡುತ್ತಿರುವ ಲಭ್ಯವಿರುವ ದಾಖಲೆಗಳು ಮತ್ತು ಪುರಾವೆಗಳು, ಸ್ತ್ರೀವಾದವು ವಾಸ್ತವವಾಗಿ, ಬೇರೆಯವರನ್ನು ಅಥವಾ ಶೋಷಿತರನ್ನು ಅಥವಾ ಬ್ರಾಹ್ಮಣರೇತರನ್ನು ಅಳುವ ವರ್ಗಕ್ಕೆ ಸೇರದ ಬಿಳಿಯರಲ್ಲದವರನ್ನು ಶಿಕ್ಷಿಸಲು ಮತ್ತು ಅವಮಾನಿಸಲು ಬ್ರಾಹ್ಮಣವಾದ ಕ್ಕಿಂತ ಸಮರ್ಥವಾಗಿದ್ದು ಮತ್ತು ಹೆಚ್ಚು ತೀಕ್ಷ್ಣವಾಗಿ ಸುಸಜ್ಜಿತವಾಗಿದೆ. ಹಾಗಾಗಿ ಪುರಾವೆಗಳನ್ನು ನೋಡುವ ತನಕ ‘ಸ್ತ್ರೀವಾದವು ಬ್ರಾಹ್ಮಣವಾದ’ ಅಥವಾ ‘ಸ್ತ್ರೀವಾದವು ಮೇಲರಿಮೆ ಪ್ರಾಬಲ್ಯವಾದ’ ಎಂಬ ಹೇಳಿಕೆ ನನ್ನ ನ್ಯಾಯಯುತ ವಾಸ್ತವವಾಗಿರುತ್ತದೆ. ಇದು ಚರ್ಚೆಗೆ ಮುಕ್ತವಾಗಿದೆ, ಎಳೆ ಎಳೆ ಯಾಗಿ ಬಿಡಿಸಲು ಮುಕ್ತವಾಗಿದೆ ಆದರೆ ಅದನ್ನು ಸಾಕ್ಷ್ಯಗಳೊಂದಿಗೆ ಬಿಡಿಸಬೇಕೆಂದು ನಾನು ಬಯಸುತ್ತೇನೆ. ಅದನ್ನೇ ನಾನು ಹೇಳಲು ಬಯಸುತ್ತೇನೆ.

————————————————————

ಅನು ರಾಮದಾಸ್ ರೌಂಡ್ ಟೇಬಲ್ ಇಂಡಿಯಾದ ಸಹ ಸಂಸ್ಥಾಪಕ ಸಂಪಾದಕರಾಗಿದ್ದಾರೆ

ಕನ್ನಡ ಅನುವಾದ – ಶ್ರೀಧರ ಅಘಲಯ

ಕನ್ನಡ ಅನುವಾದ ಭಾಗ ೧

ಕನ್ನಡ ಅನುವಾದ ಭಾಗ ೨

ಸವರಿ ಮತ್ತು ರೌಂಡ್ ಟೇಬಲ್ ಇಂಡಿಯಾದಲ್ಲಿ ಮೊದಲು ಪ್ರಕಟಿತ ಇಂಗ್ಲಿಷ್ ಲೇಖನ ‘Feminism is Brahminism’