Round Table India
You Are Reading
ಬಾಣಭಟ್ಟನಿಗೊಂದು ಚಿತ್ರ
0
Features

ಬಾಣಭಟ್ಟನಿಗೊಂದು ಚಿತ್ರ

ikon

ಬಾಣಭಟ್ಟನಿಗೊಂದು ಚಿತ್ರ

ಅನು ರಾಮದಾಸ್ 

ikon

 ಹಿಂದೊಮ್ಮೆ, ನಾನು ಶೂದ್ರ ಸಂತ-ಕವಿ ಸರಲದಾಸ ಬರೆದ ಒರಿಯಾ ಮಹಾಭಾರತದ ಅನುವಾದವನ್ನು ಹುಡುಕುತ್ತಿದ್ದೆ. ಸರಲ ಅವರ ಗಂಗಾ ಕೇಂದ್ರದಲ್ಲಿಟ್ಟು ಆಯ್ದ ಭಾಗವನ್ನು ಶೇರ್ಡ್ ಮಿರರ್ ನಲ್ಲಿ ಪೋಸ್ಟ್ ಮಾಡಲು ನಾನು ಉತ್ಸುಕನಾಗಿದ್ದೆ, ಹೀಗೆ ನಾನು ಗ್ರಂಥಾಲಯ ಮತ್ತು ಅಂತರ್ಜಾಲ ಹುಡುಕಾಟಗಳನ್ನು ಸಂಯೋಜಿಸುವಲ್ಲಿ ನಿರತನಾಗಿದ್ದಾಗ ಬ್ರಾಹ್ಮಣ ಕವಿ ಬಾಣ ಭಟ್ಟನು ಬರೆದ ಕವಿತೆಯೊಂದರಿಂದ ದಾರಿ ತಪ್ಪಿದೆ.

ನಾನೀಗ ಈ ಬ್ರಾಹ್ಮಣ ಕವಿಯೊಂದಿಗೆ ಪ್ರೀತಿಯಿಂದಿದ್ದೇನೆ.

ಇಲ್ಲ, ನಿಜವಾಗಿಯೂ ಅಲ್ಲ, ಬೇಸರವಂತೂ ಖಂಡಿತ ಆಗಿರಲಿಲ್ಲ, ಸಾಮಾನ್ಯವಾಗಿ ಬ್ರಾಹ್ಮಣ / ಮುಖ್ಯವಾಹಿನಿಯ ಸಾಹಿತ್ಯ ನಾನು ಓದುವಾಗ ಆದಂತೆ. ಕವಿತೆಯಲ್ಲಿ ಜಾತಿಯ ಬಗ್ಗೆ ಯಾವುದೇ ಉಲ್ಲೇಖವಿಲ್ಲದಿದ್ದರೂ, ಅದು ಬಹಳಷ್ಟು ಆಕರ್ಷಕವಾಗಿದೆ. ವಸಾಹತುಶಾಹಿಯ ಭಯ ಮತ್ತು ಆತಂಕವನ್ನು ಸುಂದರವಾಗಿ ಬೆಳಗಿಸುವ, ಕೆಲವೇ ಸಾಹಿತ್ಯಕ ಸಾಲುಗಳಿಂದ ಮೂಲ ನಿವಾಸಿಗಳ ರಾಕ್ಷಸೀಕರಣಕ್ಕೆ ನೀಲನಕ್ಷೆಯನ್ನು ತಯಾರು ಮಾಡುತ್ತಾನೆ ; ಅವರ ವಂಶಸ್ಥರಿಗೆ ನಿರಂತರವಾಗಿ ಉತ್ತಮ ಪಡಿಸಲು ಒಂದು ಪಠ್ಯ ಸಾಧನ. ಏಕೆಂದರೆ, ವಸಾಹತುಶಾಹಿ ಎಂದರೆ ವಸಾಹತುಗೊಂಡವರ ಅಳಿವು ಎಂದರ್ಥವಲ್ಲ , ಇದರ ಅರ್ಥವೇನೆಂದರೆ, ಮೂಲ ನಿವಾಸಿಗಳು ‘ಬೇರೆಯವರು ‘ ಎಂಬ ಸ್ಥಿರ ಸ್ಥಿತಿಯಲ್ಲಿ ಉಳಿಯುವ ಸಂಕೀರ್ಣ ವ್ಯವಹಾರ. ಮತ್ತು ಜಾತಿ ಎಂದರೆ ಬೇರೆಯವರ ಬಗ್ಗೆ, ಅಲ್ಲವೇ?

 ದಬ್ಬಾಳಿಕೆಗಾರ ಮತ್ತು ತುಳಿತಕ್ಕೊಳಗಾದವರ ಜನಾಂಗ ಮತ್ತು ಭೌಗೋಳಿಕತೆಯು ಸ್ಪಷ್ಟವಾಗಿಲ್ಲದಿದ್ದಾಗ, ಆಂತರಿಕ ವಸಾಹತುಶಾಹಿ ಪ್ರಕ್ರಿಯೆಗಳನ್ನು ನಾವು ಎಲ್ಲಿ ಮತ್ತು ಹೇಗೆ ಕಂಡುಹಿಡಿಯುವುದು? ಬಹುಶಃ ಎರಡೂ ಕಡೆಯ ನಿರೂಪಣೆಗಳಲ್ಲಿ(?)

ಹರ್ಷಚರಿತ್ರ ಮತ್ತು ಕಾದಂಬರಿಯಲ್ಲಿ, ಬಾಣ ಬ್ರಾಹ್ಮಣ ಕೇಂದ್ರಿತ ವಿಶ್ವ ದೃಷ್ಟಿಕೋನದಿಂದ ಬರೆಯುತ್ತೇನೆ ಎಂದು ನೇರವಾಗಿ ಸ್ಪಷ್ಟಪಡಿಸುತ್ತಾನೆ. ಸಾಹಿತ್ಯ ಮತ್ತು ಸಾಹಿತ್ಯೇತರ ಕೃತಿಗಳ ಪರಿಚಯಗಳಲ್ಲಿ, ಅವನು ತನ್ನ ನಿಷ್ಪಾಪ ಬ್ರಾಹ್ಮಣ ವಂಶಾವಳಿಯನ್ನು ಸಾಮಾನ್ಯವಾಗಿ ಮಾನವೇತರ, ಸ್ವರ್ಗೀಯ ಮೂಲಕ್ಕೆ ಗುರುತಿಸುತ್ತಾನೆ. ಈಗ, ಕಾದಂಬರಿಯ ಒಂದು ನಿರ್ದಿಷ್ಟ ಬಾಗದಲ್ಲಿ ಬಾಣ ‘ ಬೇರೆಯದನ್ನು’ ಹೇಗೆ ಸೃಷ್ಟಿಸುತ್ತಾನೆ ಎಂದು ಪರಿಶೀಲಿಸೋಣ. ಕೆಳಗಿನ ಪದ್ಯಗಳು ಬಾಣನ ‘ಸುಸಂಸ್ಕೃತ’ ವೀರರು ದಟ್ಟ ಕಾಡನ್ನು ಅತಿಕ್ರಮಣ ಮಾಡಿ ಸವರ ಜನರನ್ನು ಮುಖಾಮುಖಿಯಾದಾಗಿನ ಚಿತ್ರಿಸುವ ದೃಶ್ಯದ ಒಂದು ಭಾಗವಾಗಿದೆ. ಸವರ ಜನರು ಈ ಭೂಮಿಯ ಮೂಲ ನಿವಾಸಿಗಳಲ್ಲಿ ಒಬ್ಬರು ಎಂಬುದಕ್ಕೆ ಸಾಕಷ್ಟು ಪರಿಶೀಲಿಸಬಹುದಾದ ಪುರಾವೆಗಳಿವೆ. ಹೀಗೆ ಈ ಕವಿತೆಯಲ್ಲಿ ನಾವು ಸವರರ ಬಗ್ಗೆ ಬ್ರಾಹ್ಮಣರ ದೃಷ್ಟಿಕೋನವನ್ನು ನೋಡುತ್ತಿದ್ದೇವೆ. ‘ ಬೇರೆಯದನ್ನು ‘ ವಿವರಿಸುವ ಬರಹಗಾರನಿಗೆ ಯುದ್ಧದ ದೃಶ್ಯದಲ್ಲಿ, ಒಂದು ಅಚ್ಚುಕಟ್ಟಿನ ನಡೆಯಲ್ಲಿ, ನಿಮ್ಮ ಓದುಗರು ಯಾರನ್ನು ಭಯ, ತಿರಸ್ಕಾರ ಮತ್ತು ದ್ವೇಷ ಮಾಡಬೇಕೆಂದು ತಿಳಿಸುವುದು ಬಹಳಷ್ಟು ಸುಲಭ . ಇದು ಕಥೆ ಹೇಳುವಷ್ಟು ಹಳೆಯದಾದ ಸಾಹಿತ್ಯ ಸಾಧನವಾಗಿದೆ. ತರಬೇತಿ ಪಡೆದ ಮಾನವಶಾಸ್ತ್ರಜ್ಞರು ಎದ್ದು ಕುಳಿತು ಗಮನ ಕೊಡುವಂತೆ, ‘ಶತ್ರು’ ಸವರ ಅವರ ಹಿನ್ನಲೆ, ಜೀವನ ವಿಧಾನವನ್ನು ಬಾಣ ಎಚ್ಚರಿಕೆಯಿಂದ ವಿವರಿಸುತ್ತಾನೆ. ಬಾಣ ಹೇಗೆ ಸವರ ಅವರ ಬಗ್ಗೆ ವಿವರಿಸಲು ಪ್ರಾರಂಭಿಸುತ್ತಾನೆ ಎಂಬುದು ಇಲ್ಲಿದೆ:

ಓಹ್, ಜ್ಞಾನವಿಲ್ಲದ ಬದುಕು
ಬುದ್ದಿವಂತರು ತೆಗಳಿದ ಜೀವನ
ತಿನ್ನುವರು ಮಾಂಸ ಜೇನುತುಪ್ಪ
ನಿಷೇಧಿಸಿದೆ ನಾಗರಿಕ ಸಮಾಜ

ನ್ಯೂನತೆಯಿಲ್ಲದ ಚಿತ್ರಕಥೆ ವಸ್ತು!

1 ನೇ ಸಾಲು: ಶತ್ರುವಿಗಿಲ್ಲ ಮಾನವಕುಲದ ಏಕೈಕ ಅತ್ಯಂತ ಶಕ್ತಿಯುತ ಆಯುಧ – ಜ್ಞಾನ
2 ನೇ ಸಾಲು: ಮೂರನೇ ವ್ಯಕ್ತಿಯ ಖಂಡನೆಯೊಂದಿಗೆ ಅದನ್ನು ದೃಡೀಕರಿಸು , ಖಂಡನೆಗೆ ಯಾವುದೇ ಪುರಾವೆ ಅಥವಾ ಕಾರಣ ಅಗತ್ಯವಿಲ್ಲ. ಮೂರನೇ ವ್ಯಕ್ತಿಗೆ ತಟಸ್ಥತೆಗೆ ಹೆಸರು ಅಥವಾ ಹಕ್ಕುಇರಬೇಕಿಲ್ಲ , ಕೇವಲ ‘ಬುದ್ಧಿವಂತ’ ಎಂದು ಟ್ಯಾಗ್ ಮಾಡಿ ಮತ್ತು ಅಷ್ಟು ಸಾಕು.
3 ನೇ ಸಾಲು: ಮಹತ್ವದ್ದಾಗಿದೆ , ಆಹಾರದ ವ್ಯತ್ಯಾಸವನ್ನು ಪಟ್ಟಿ ಮಾಡಿ, ಮತ್ತು ಮುಂಬರುವ ಎಲ್ಲ ಸಮಯಕ್ಕೊ ‘ ಬೇರೆಯದನ್ನು ‘ ದೃಡಪಡಿಸಿ, ಆಹಾರದ ದ್ವೇಷವು ವಿಫಲ-ನಿರೋಧಕವಾಗಿದೆ, ಗುರುತ್ವಾಕರ್ಷಣೆಯಂತೆ ಕಾರ್ಯನಿರ್ವಹಿಸುತ್ತದೆ, ಅದು ಬೇರೆಯವರಿಂದ ಸ್ವಂತಿಕೆ ನಿರ್ವಹಣೆಗೆ ಅವಶ್ಯಕವಾಗಿದೆ . ಬಾಣ, ಬ್ರಾಹ್ಮಣ ಕವಿ, ನಿಖರವಾಗಿ ಮತ್ತು ಉತ್ತುಂಗದಲ್ಲಿದ್ದಾನೆ,

ಮೇಲಿನ ಪದ್ಯದಿಂದ ಓದುಗರಿಗೆ ತಲುಪುತ್ತಿರುವ ಸಂದೇಶವನ್ನು ತಿಳಿದುಕೊಳ್ಳಿ. ಬಾಣನ ವೀರರಿಗೆ ಗೆಲುವು ಸ್ಪಷ್ಟ ಮತ್ತು ಸುಲಭ; ನಾವು ವ್ಯವಹರಿಸುತ್ತಿರುವುದು’ಜ್ಞಾನವಿಲ್ಲದ ಜೀವಿಗಳೊಂದಿಗೆ!’ ಕವಿ ಮತ್ತಷ್ಟು ಮಾನವ ಗುಣಲಕ್ಷಣಗಳ ಕೊರತೆಯನ್ನು ತೋರಿಸುತ್ತ ಕೆಳಮುಖ ಸುರುಳಿಯಲ್ಲಿ ಮುಂದುವರಿಯಲು ಮಾತ್ರ ಸಾಧ್ಯವಿರುವ ದಾರಿಗೆ ತಯಾರು ಮಾಡುತ್ತಾನೆ.

ಬೇಟೆಯಾಡುವುದು ಅವರ ದೈಹಿಕ ವ್ಯಾಯಾಮ
ಪಕ್ಷಿಗಳ ಸ್ವರೂಪ ಅರ್ಥೈಸುವುದು
ಅವರ ಬುದ್ಧಿವಂತಿಕೆ
ಅವರ ಜೊತೆಗಾರರು ನಾಯಿಗಳು
ಅವರ ರಾಜ್ಯವು ಏಕಾಂಗಿ ಕಾಡು. (1)

ಈಗ ಇದು ಕೆಳಗಿಳಿಯುತ್ತಿದೆಯೇ ಅಥವಾ ಮೇಲೇರುತ್ತಿದೆಯೇ? ಈ ಪದ್ಯ ನನಗೆ ಕಚಗುಳಿ ಇಟ್ಟಂತೆ ಮಾಡಿತು, ಇದನ್ನು ಓದಿ ಕೆಲವು ‘ರಾಜಕೀಯವಾಗಿ ಸರಿಯೆನಿಸುವ’ ಬ್ರಾಹ್ಮಣ ಆತ್ಮಗಳು ವಿಲಿಗುಟ್ಟಿತ್ತಿರಬೇಕು ಅಥವಾ ಇಲ್ಲದಿರಬಹುದು. ಚಿಂತಿಸಬೇಡಿ, ಪ್ರಿಯರೇ , ಇದು ಆಧುನಿಕ ಕಾಲದ ಹಿಂದಿನ ಬಾಣ, ಅವನಿಗೆ ಸ್ವಲ್ಪ ಕರುಣೆ ತೋರಿಸೋಣ , ಹಸಿರು ಚಳುವಳಿಯ ಬಗ್ಗೆ ಅವನಿಗೆ ಸುಳಿವಿಲ್ಲ, ಪಕ್ಷಿವಿಜ್ಞಾನದಂತಹ ವಿಶೇಷ ವಿಭಾಗಗಳು ಅಥವಾ ಪರಿಸರ ವಿಜ್ಞಾನದಂತಹ ಸಂಕೀರ್ಣ ಬಹುಶಿಕ್ಷಣ ವಿಷಯಗಳು ಇನ್ನೂ ಹುಟ್ಟಿರಲಿಲ್ಲ, ಮತ್ತು ಸಾಕು ಪ್ರಾಣಿ ಸಂಸ್ಕೃತಿಗಳು ಬಹು-ಮಿಲಿಯನ್ ಡಾಲರ್ ಉದ್ಯಮವಾಗಿ ಆರಂಭವಾಗಿರಲಿಲ್ಲ. ಬದಲಾಗಿ, 9 ನೇ ಸಾಲಿನಲ್ಲಿ ಅವರ ಬಹು ಸುಂದರವಾದ ಒಳನೋಟವನ್ನು ನಾವು ಕೇಂದ್ರೀಕರಿಸೋಣ: “ಅವರ ರಾಜ್ಯವು ಏಕಾಂಗಿ ಕಾಡು!” ಮತ್ತು ಮುಂದೇನು ಬರುತ್ತದೆ

ಹುಲಿಯಂತಹ ಕ್ರೂರ ಪ್ರಾಣಿಗಳೊಂದಿಗೆ ವಾಸ
(ಆದ್ದರಿಂದ ಅವರು ಕ್ರೂರರು)
ಪ್ರಾಣಿಗಳ ರಕ್ತ
ದೇವರ ಪೂಜೆಗೆ
ಕಳ್ಳತನ ಅವರ ಜೀವನ
ನಾಗರ ಹಾವು ಆಭರಣ.

ಈ ಪದ್ಯಗಳು, ವಸಾಹತುಶಾಹಿಗಳಿಗಿರುವ ಸ್ಥಳೀಯರ ಮತ್ತು ಅವರ ಜೀವನಶೈಲಿಯ ಭಯ , ವಸಾಹತುಶಾಹಿ ತೀವ್ರವಾಗಿ ಬಯಸುವ ಸ್ಥಳೀಯರ ಸಾಮರ್ಥ್ಯ ಮತ್ತು ಪರಿಸರದ ಬಗ್ಗೆ ಇರುವ ಜ್ಞಾನ, ಇದರ ಬಗ್ಗೆ ಸ್ವಲ್ಪವೇ ಇತಿಹಾಸ ತಿಳಿದಿರುವ ಯಾರಿಗಾದರೂ ಸ್ವಯಂ ವಿವರಣಾತ್ಮಕವಾಗಿವೆ. .
ಕಾಡು ಏಕಾಂಗಿ, ಆದರೆ, ಅದು ಸಾಮ್ರಾಜ್ಯ !

ನಂತರ, ಬ್ರಾಹ್ಮಣ ಕವಿ ಬಾಣ ಜಾಗತಿಕ ಪಿತೃಪ್ರಭು ವಾಗಿ ಹೊರಬರುತ್ತಾನೆ ಮತ್ತು ಅವನ ಕಾಲದ ಸವರರ ಲಿಂಗ ಸಂಬಂಧಗಳ ಬಗ್ಗೆ ತನ್ನ ಅವಲೋಕನವನ್ನು ಪ್ರಸ್ತುತಪಡಿಸುತ್ತಾನೆ.

ಸೆರೆಹಿಡಿಯಲ್ಪಟ್ಟ ಮಹಿಳೆಯರು ಅವರ ಹೆಂಡತಿಯರು.
ಅವರಾಗಲೆ ಬೇರೆಯವರ ಹೆಂಡತಿಯರಾಗಿದ್ದರು.

ಇಲ್ಲಿ ತನ್ನ ತಾತ್ಸಾರ ತಿಳಿಸಲು ಬಾಣನಿಗೆ ಹೆಚ್ಚೇನೂ ಪದಗಳು ಬೇಕಾಗಿಲ್ಲ, ಕೇವಲ ಎರಡು ಸಾಲುಗಳಲ್ಲಿ ಹಿಂದೊಮ್ಮೆ ಬೇರೆಯವರ ಹೆಂಡತಿಯಾಗಿರುವ ಮಹಿಳೆಯರು ಮತ್ತು ಅವರನ್ನು ಸ್ವೀಕರಿಸುವ ಪುರುಷ ರನ್ನು ಸಂಪೂರ್ಣ ಬಲದಿಂದ ಕಳಂಕಿತರನ್ನಾಗಿ ಮಾಡುತ್ತಾನೆ . ಸೆರೆಹಿಡಿಯುವ ಭಾಗಕ್ಕೆ ಸಂಬಂಧಿಸಿದಂತೆ, ಆಸಕ್ತ ಓದುಗರಿಗೆ ಇಂಟರ್ನೆಟ್ ದೇವತೆ ಇತರ ಸಾಧ್ಯತೆಗಳನ್ನು ಕೊಡುತ್ತದೆ : ಸವರ ಜನರು, ವಿವಾಹಿತ ಮತ್ತು ಅವಿವಾಹಿತ ಗಂಡಸು ಮತ್ತು ಹೆಂಗಸರಿಗೆ ಓಡಿಹೋಗಲು ಅನುಮತಿ ನೀಡುತ್ತಾರೆ, ಎರಡನೇ ವಿವಾಹಗಳು ಪುರುಷರು ಮತ್ತು ಮಹಿಳೆಯರಿಗೆ ಸಾಮಾನ್ಯವಾಗಿದೆ (2). ಗರ್ಭಿಣಿ ಮಹಿಳೆ ತನ್ನ ಮೊದಲ ಮದುವೆಯಿಂದ ಹೊರಗುಳಿಯುವುದು ಮತ್ತು ಎರಡನೆಯ ಗಂಡನನ್ನು ಹುಡುಕುವುದು ಯಾವುದೇ ಭೂ ಛಿದ್ರ ಗೊಳಿಸುವ ಕ್ರಾಂತಿಗಳಿಗೆ ಕಾರಣವಾಗುವುದಿಲ್ಲ; ಮಗುವನ್ನು ಹೊಸ ಕುಟುಂಬಕ್ಕೆ ಸ್ವಾಗತಿಸಲಾಗುತ್ತದೆ.
ಸವರ ಪುರುಷರು, ಸ್ತ್ರೀಯರ ಬಗ್ಗೆ ಅನಿಯಂತ್ರಿತ ಪುರುಷ ಭಯದ ಸುತ್ತ ತಿರುಗುವ ಪಿತೃಪ್ರಭುತ್ವದ ಸಾರ್ವತ್ರಿಕ ಮಾದರಿಗೆ, ವಿರುದ್ಧವಾಗಿದ್ದಂತಿತ್ತು. ಬಾಣನನ್ನು ಅವನ ಬ್ರಾಹ್ಮಣೀಯ ಪರಂಪರೆಗೆ ಜವಾಬ್ದಾರನನ್ನಾಗಿ ಮಾಡಲಾಗುವುದಿಲ್ಲ ; ಅವನ ಎರಡು ಬಾರಿ ಜನಿಸಿದ ಸ್ಥಾನಮಾನವೇ ಗರ್ಭ ಕೋಶದ ನಿಯಂತ್ರಣದ ಸುತ್ತ ಸುತ್ತುತ್ತದೆ. ಉಪನಯನ ಸಮಾರಂಭ ದ ಬಗ್ಗೆ ಇತಿಹಾಸಕಾರರೊಬ್ಬರು ಈ ಆಸಕ್ತಿದಾಯಕ ಓದುವಿಕೆಯನ್ನು ನೀಡಿದ್ದಾರೆ:

ಬ್ರಾಹ್ಮಣ ಸಾಹಿತ್ಯದ ಆಧಾರದ ಮೇಲೆ, ಜೈವಿಕ ಸಂತಾನೋತ್ಪತ್ತಿಯನ್ನು ನಿರ್ದಿಷ್ಟ ಸಾಮಾಜಿಕ ಸನ್ನಿವೇಶದಲ್ಲಿ ಹಿಡಿದಿಡಲು ಪ್ರಯತ್ನಿಸಲಾಯಿತು. ಒಂದೆಡೆ, ಕಾನೂನುಬದ್ಧ ಸಂತಾನೋತ್ಪತ್ತಿಯನ್ನು ವಿವಾಹದೊಂದಿಗೆ ಸಂಬಂಧಿಸಲಾಯಿತು. . ಅದಕ್ಕಿಂತ ಹೆಚ್ಚಾಗಿ, ಹೆಂಡತಿಯನ್ನು ಸಂತಾನೋತ್ಪತ್ತಿ ಮಾಡುವ ಸಾಧನವಾಗಿ ಕಟ್ಟಿ , ಆಕೆಯ ಸಂತಾನೋತ್ಪತ್ತಿ ಶಕ್ತಿಯನ್ನು ವಿವಿಧ ಆಚರಣೆಗಳ ಮೂಲಕ ಸ್ವಾಧೀನಪಡಿಸಿಕೊಳ್ಳಲಾಯಿತು. ಅಂತೆಯೇ, ಅವಳು ಸಂತಾನೋತ್ಪತ್ತಿಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿತ್ತು ಆದರೆ ಹುಟ್ಟಿದ ಮಕ್ಕಳಿಗೆ ಅವಳ ಹಕ್ಕುಗಳು ಗಂಡನ ನಂತರವಷ್ಟೇ ಇತ್ತು. ಇದರ ವಿಸ್ತರಣೆಯಾಗಿ, ಮಕ್ಕಳು, ವಿಶೇಷವಾಗಿ ಪುತ್ರರು, ಆಚಾರದಂತೆ ಪಿತೃಗಳಿಗೆ ಸಮೀಪವಾಗಿದ್ದರು. ಇದಲ್ಲದೆ, ಆಚರಣೆಗಳು, ಮಂತ್ರಗಳು ಮತ್ತು ಕಲಿಕೆ ಭೌತಿಕ ಪ್ರಕ್ರಿಯೆಗೆ ವಿರುದ್ಧವಾಗಿ ಸಂತಾನೋತ್ಪತ್ತಿಯ ಮಾಡುವ ಉತ್ಕೃಷ್ಟ ಸಾಧನವೆಂದು ಚಿತ್ರಿಸಲಾಗಿದೆ. ಇದನ್ನು ಬಲಪಡಿಸಲು ಮುಟ್ಟು ಮತ್ತು ಹೆರಿಗೆಯಂತಹ ಸಂಬಂಧಿತ ಪ್ರಕ್ರಿಯೆಗಳನ್ನು ಮಾಲಿನ್ಯ ಎಂದು ಚಿತ್ರಿ ಸಲಾಯಿತು . ಒಂದರ್ಥದಲ್ಲಿ, ಇದು ಎರಡನೆಯ, ಆಧ್ಯಾತ್ಮಿಕ ಜನ್ಮವೆಂದು ಪರಿಗಣಿಸಲ್ಪಟ್ಟ ಉಪನಯನ ಅಥವಾ ದೀಕ್ಷೆಗೆ ಸವಲತ್ತು ಕೊಡುವಂತಾಯಿತು . ಇದನ್ನು ಮೊದಲ ದೈಹಿಕ ಜನನಕ್ಕಿಂತ ಉತ್ತಮವೆಂದು ನೋಡಲಾಯಿತು. (3)

ಬ್ರಾಹ್ಮಣೇತರ ಪುರುಷರು ಮತ್ತು ಮಹಿಳೆಯರನ್ನು ವಿವರಿಸುವಾಗ ಬಾಣ ಹಲವಾರು ರೀತಿಯ ಮಾಲಿನ್ಯಗಳನ್ನು ಅಂಗೀಕರಿಸಿ ಬಲಪಡಿಸಿಯೇ ತೀರಬೇಕು. .

ನಿರಂತರವಾಗಿ ವಿಲೀನಗೊಳ್ಳುವುದನ್ನು ವಿರೋಧಿಸುವ ಬ್ರಾಹ್ಮಣೇತರ ಸಮುದಾಯದ ಹೆಂಗಸರು ಅನೇಕ ಪಠ್ಯ ಮತ್ತು ಪಠ್ಯೇತರ ಮೂಲಗಳನ್ನು ಬಳಸಿಕೊಂಡು ಆಂತರಿಕ ವಸಾಹತುಶಾಹಿಯನ್ನು ತೆರೆದಿಡಲು ಅಂತಹ ವ್ಯತಿರಿಕ್ತ ನಿರೂಪಣೆಗಳನ್ನು ಹುಡುಕಿ ಪರಿಶೀಲಿಸಬೇಕು.

ಐಕಾನ್ ಚಿತ್ರಿಸಿದ ಕಥೆಗಳು

ಸವರ ಬಗ್ಗೆ ಸಾಕಷ್ಟು ಜ್ಞಾನವನ್ನು ಹೊಂದಿದ್ದರೂ, ಬಾಣ ಅವರ ಅಲಂಕರಿಸಿದ ಮನೆಗಳ ಐಕಾನ್ ಚಿತ್ರಗಳ ಬಗ್ಗೆ ಬೇರೆಲ್ಲೂ ಪ್ರತಿಕ್ರಿಯಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. (4) ಆ ವರ್ಣಚಿತ್ರಗಳು ಅವನಿಗೆ ಏನನ್ನು ಸೂಚಿಸುತ್ತವೆ? ಜ್ಞಾನವಿಲ್ಲದೆ ಬದುಕಿದ ಜೀವಗಳು ಜ್ಞಾನ ಕೋಶವನ್ನು ಚಿತ್ರಾತ್ಮಕ ಕಲೆಯಾಗಿ ರಚಿಸಲು ಸಾಧ್ಯವೇ? ಸವರ ಕಲೆ ನೆನಪಿನಿಂದ ಅಳಿಸಲ್ಪಟ್ಟ ನಂತರವೂ ಲಿಖಿತ ಪದವು ಮುಂದುವರಿಯುತ್ತದೆ ಎಂದು ಬಾಣ ನಂಬಿರಬಹುದು . ಅಥವಾ ಸರಳವಾಗಿ ಹೇಳಬೇಕೆಂದರೆ ಸವರ ಕಲೆಯಲ್ಲಿ ಸಂಕೇತಿಸಲ್ಪಟ್ಟ ಜ್ಞಾನವನ್ನು ಲಿಖಿತ ಪಠ್ಯಗಳಂತೆ ಸುಲಭವಾಗಿ ಅರ್ಥೈಸಲಾಗುವುದಿಲ್ಲ. ಈ ಸಂದರ್ಭದಲ್ಲಿ ಇದನ್ನು ನಾನು ಪೂರ್ಣ ಹೃದಯದಿಂದ ಒಪ್ಪುತ್ತೇನೆ.
ಪ್ರಶ್ನೆಯನ್ನು ಕೇಳುವಾಗ, ಈ ಕಲಾ ಪ್ರಕಾರದಲ್ಲಿ ಹುದುಗಿರುವ ನಿರೂಪಣೆಗಳನ್ನು ಅರ್ಥೈಸಲು ನಾವು ಯಾವುದೇ ಕೌಶಲ್ಯಗಳನ್ನು ಹೊಂದಿದ್ದೇವೆಯೇ ಎಂದು ಕೇಳುವುದು ಪ್ರಶ್ನಾರ್ಹ – ನಾವು, ಬ್ರಾಹ್ಮಣ ಶಿಕ್ಷಣ ವ್ಯವಸ್ಥೆಯ ಉತ್ಪನ್ನಗಳಾಗಿರುವುದರಿಂದ ಕಲಿತ ಕೌಶಲ್ಯಗಳಿಂದ ಬ್ರಾಹ್ಮಣೇತರ ಪರಂಪರೆಯನ್ನು ಅರ್ಥಮಾಡಿಕೊಳ್ಳಲು ಸಾಧ್ಯವೇ?

ಪೂರ್ವನಿಯೋಜಿತ ಪರ್ಯಾಯದ ಮೂಲಕ ನೋಡಿದರೆ? ಪಾಶ್ಚಿಮಾತ್ಯ ಲೆನ್ಸ್ ಧರಿಸಿ ಕಾಂಟ್ ಈ ಕಲೆಯ ಬಗ್ಗೆಯ ಏನೆಂದುಕೊಂಡಿರಬಹುದು ಎಂದು ಊಹಿಸಿ ಅಥವಾ ಉತ್ಪಾದನೆಯಲ್ಲಿ ತೊಡಗಿರುವ ಮಾನವರ ಚಿತ್ರಗಳು ಮತ್ತು ಅದು ಯಾವ ರೀತಿಯ ಸಾಮಾಜಿಕ ವ್ಯವಸ್ಥೆಯನ್ನು ನೀಡುತ್ತದೆ ಎಂಬುದರ ಬಗ್ಗೆ ಮಾರ್ಕ್ಸ್ ನ ವ್ಯಾಖ್ಯಾನ ಅಥವಾ ಪುರುಷರು ಮತ್ತು ಮಹಿಳೆಯರನ್ನು ಸಮಾನ ಸ್ಥಾನಮಾನದಲ್ಲಿ ಪ್ರತಿನಿಧಿಸಲಾಗಿರುವ ಚಿತ್ರಗಳ ಬಗ್ಗೆ ಆಡ್ರೆ ಲಾರ್ಡ್ ಏನು ಹೇಳಬಹುದು? ಯಂತ್ರ ಓದುವಿಕೆಗಾಗಿ ನೈಸರ್ಗಿಕ ವಿಜ್ಞಾನದ ಬಗ್ಗೆ ಮಾಹಿತಿಯನ್ನು ಎನ್ಕ್ರಿಪ್ಟ್ ಮಾಡುವ ನನ್ನ ಸ್ವಂತ ತರಬೇತಿ ಮತ್ತು ತೊಡುಗುವಿಕೆ ಉಪಯೋಗವಾಗುವುದೇ? ಸವರ ವರ್ಣಚಿತ್ರದ ಅತ್ಯಂತ ಪ್ರಾಸಂಗಿಕ ವೀಕ್ಷಕರಿಗೆ ಶೈಲೀಕೃತ ಸಂಕೇತಗಳಾಗಿ ಗೋಚರಿಸುವ

ನೈಸರ್ಗಿಕ ವಿಜ್ಞಾನದ ಬುದ್ಧಿವಂತಿಕೆಯ ಸಂಕೇತಗಳನ್ನು ಬಿಚ್ಚಿಡಲು ನಾನು ಪ್ರಾರಂಭಿಸಬಹುದೇ?
ಇವು ವಾಸ್ತವ, ಸಸ್ಯ, ಪ್ರಾಣಿ, ಮಾನವರು ಮತ್ತು ಅವುಗಳ ಚಟುವಟಿಕೆಗಳ ಚಿತ್ರಾತ್ಮಕ ನಿರೂಪಣೆಗಳಾಗಿವೆ. ಅವರೊಳಗಿನ ಸಾಂಕೇತಿಕತೆಯನ್ನು ಗ್ರಹಿಸಲು ಸಾಧ್ಯವಾಗುವುದು ಮಾನವಕುಲದ ಇತಿಹಾಸದ ಆಳವಾದ ತಿಳುವಳಿಕೆಯಿಂದ , ಬದಲಾಗುತ್ತಿರುವ ಪರಿಸರ ಮತ್ತು ನೈಸರ್ಗಿಕ ವೈವಿಧ್ಯತೆಯ ವಿಮರ್ಶಾತ್ಮಕ ಜ್ಞಾನವನ್ನು ಹೊಂದಿರುವುದರಿಂದ; ನಿರ್ಜೀವ ಮತ್ತು ಜೀವಂತ, ನೈಜ ಮತ್ತು ಪೌರಾಣಿಕ ಪ್ರಪಂಚಗಳ ನಡುವೆ ಇರುವ ಉಸಿರಾಟದ ಜೀವನದ ತಾತ್ಕಾಲಿಕತೆಯನ್ನು ಅರಿತಿರಬೇಕು . ಮತ್ತು ಚಿತ್ರಾತ್ಮಕವಾಗಿ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲ ಮತ್ತು ಮುಂದುವರಿಕೆಯನ್ನು ದಾಖಲಿಸುವ ತಿಳುವಳಿಕೆ ಇರಬೇಕು .

ಐಕಾನ್ ಅಥವಾ ಬ್ರಾಹ್ಮಣೇತರ ಪ್ರಪಂಚದ ವಿವಿಧ ಪಠ್ಯೇತರ ನಿರೂಪಣೆಗಳ ಸಾವಯವ ವ್ಯಾಖ್ಯಾನವನ್ನು ಪ್ರಾರಂಭಿಸಲು ನಾವು ಹಲವಾರು ಪದರಗಳನ್ನು ಬಿಚ್ಚಿಡಬೇಕಾಗಿದೆ. ಕಠಿಣ ಕೆಲಸ, ನಿಜಕ್ಕೂ!

ಬ್ರಾಹ್ಮಣ ಕವಿಯ ವಾಸ್ತವದ ಚಿತ್ರಣ ನನಗೆ ಯಾವಾಗ ಬೇಕಾದರೂ ಕೊಡಿ , ಅದನ್ನು ಅರ್ಥೈಸುವುದು ಒಂದು ಸುಲಭದ ಆಟ.
ಅಂತೆಯೇ, ಆಧುನಿಕ ಕಾಲದಲ್ಲಿ ಬಾಣ ಭಟ್ಟನನ್ನು ಊಹಿಸಿಕೊಂಡು , ಐಕಾನ್ ಚಿತ್ರಕಲೆ ಕೊಟ್ಟರೆ ಹೇಗೆ ಅರ್ಥೈಸಬಹುದು . ಆಶಾದಾಯಕವಾಗಿ, ಸವರ ಅವರ ಐಕಾನ್ ಚಿತ್ರಕಲೆಯ ಪ್ರಾಚೀನ ಅಭ್ಯಾಸದಲ್ಲಿ ಮಹಿಳಾ ಚಳುವಳಿ ಮತ್ತು ಇತರ ಎಲ್ಲ ‘ಆಧುನಿಕ’ ವಾಸ್ತವಗಳನ್ನು ಸೂಚ್ಯವಾಗಿ ಕಾಣಬಹುದು.

ಈ ಲೇಖನ ಬ್ರಾಹ್ಮಣ ಮತ್ತು ಬ್ರಾಹ್ಮಣೇತರ ನಿರೂಪಣೆಗಳ ಏಕಕಾಲಿಕ ಪರೀಕ್ಷೆಯನ್ನು ಹುಡುಕುವ ಸರಳ ಸೂತ್ರೀಕರಣವನ್ನು ಪುನಃ ಹೇಳುವುದಕ್ಕಲ್ಲ , ಆದರೆ ಅದನ್ನು ಮಾಡುವುದರಲ್ಲಿ ನಾವು ಖುಷಿ ಪಡಲು . ನಾವು ಕಾವ್ಯ ಮತ್ತು ಚಿತ್ರಕಲೆ, ಪಠ್ಯ ಮತ್ತು ಮೌಖಿಕತೆ, ವ್ಯಥೆ ಮತ್ತು ಶ್ಲೋಕಗಳು – ಸ್ವರೂಪಗಳಲ್ಲಿ ಭಿನ್ನವಾಗಿರುವ ನಿರೂಪಣೆಗಳನ್ನು ಆಂತರಿಕ ವಸಾಹತುಶಾಹಿ ಪ್ರಕ್ರಿಯೆಗಳನ್ನು ಎದುರಿಸಲು ನಾವು ಸಹಾಯಕ್ಕೆ ತೆಗೆದುಕೊಳ್ಳಬಹುದು. ಒಂದು ಸ್ವರೂಪವು ಬಾಣನ ಕವಿತೆಯೆಂತೆ ಒಣ ರೆಂಬೆಯನ್ನು ಮುರಿಯುವಷ್ಟು ಸುಲಭವೆನ್ನಿಸುತ್ತದೆ , ಇನ್ನೊಂದು ಐಕಾನ್ ಚಿತ್ರದಂತೆ ಬಿಡಿಸಲು ಗಟ್ಟಿಯಾದ ಬೀಜದಂತೆ ಇರಬಹುದು. ಅವುಗಳಲ್ಲಿ ಹುದುಗಿರುವ ಮಾಹಿತಿಯನ್ನು ನಾವು ಸೃಜನಶೀಲ ಮಾರ್ಗಗಳ ಮೂಲಕ ಹೊರತೆಗೆದು ವಿನೂತನ ರೀತಿಯಲ್ಲಿ ಮರುಬಳಕೆ, ಮರು ವಿನ್ಯಾಸ ಮಾಡಬೇಕಾಗಿದೆ. ಇದು ಆದಿಸ್ವರೂಪದ, ಆದರ್ಶವಾದ ಸಾಮಾಜಿಕ ಕ್ರಮವನ್ನು ಹುಡುಕುವುದಲ್ಲ, ಆದರೆ ಬ್ರಾಹ್ಮಣರ ಅವಮಾನ, ಅಜ್ಞಾನ ಅಥವಾ ಜ್ಞಾನದ ಕಲ್ಪನೆಗಳ ಅಡಿಯಲ್ಲಿ ಸಮಾಧಿ ಮಾಡಲಾದ ವಿಮೋಚನಾ ಅಂಶಗಳನ್ನು ಮರಳಿ ತರಲು. ಈ ನಿರೂಪಣೆಗಳನ್ನು ಬಿಡಿಸಿ ಮತ್ತು ವ್ಯತಿರಿಕ್ತಗೊಳಿಸುವುದರಿಂದ ಬ್ರಾಹ್ಮಣೀಕರಣವನ್ನು ವಿರೋಧಿಸುವ ಮಹಿಳೆಯರಾದ ನಾವು, ಸ್ತ್ರೀ ಲೈಂಗಿಕತೆಗೆ ತೀವ್ರ ಗಮನ ಕೊಡದ ಜಗತ್ತನ್ನು ಕಲ್ಪಿಸಿಕೊಳ್ಳಲು ಮುಕ್ತರಾಗುತ್ತೇವೆ . ಜೊತೆಗೆ ತಮ್ಮ ಹೆಂಡತಿಯರ ಗರ್ಭಗಳಿಗೆ ಯಜಮಾನನಾಗಿ ನಿಯಂತ್ರಿಸುವ ಹತಾಶ ಅಗತ್ಯದಿಂದ ವಿಕಲರಾಗದ ಪುರುಷರಿರುವ ಜಗತ್ತನ್ನು. ಯುವಕರು ಭಯದ ಬದಲು ಮಹಿಳೆಯ ಮನಸ್ಸು ಮತ್ತು ದೇಹವನ್ನು ಆತ್ಮವಿಶ್ವಾಸದಿಂದ ಪಾಲುದಾರರನ್ನಾಗಿ ಮಾಡಿಕೊಳ್ಳುವಂತೆ ಬೆಳೆಸುವ ಜಗತ್ತು. ಮತ್ತು ಯುವತಿಯರನ್ನು ಅಪರಾಧ ಪ್ರಜ್ಞೆಯ ಬದಲು ಪುರುಷನ ಪೋಷಣೆ ಗುಣಲಕ್ಷಣಗಳೊಂದಿಗೆ ಆತ್ಮವಿಶ್ವಾಸದಿಂದ ಪಾಲುದಾರರಾಗಿ ಬೆಳೆಸುವ ಜಗತ್ತು. ಅಮಾನವೀಯ ಮತ್ತು ಕೊಳಕು ಜಾತಿ ಶ್ರೇಣಿಗಳು ಕರಗಿ ಹೋಗಲಿ. ಆಗ ಪುರುಷರು ಮತ್ತು ಮಹಿಳೆಯರು ಸಮಾನ ಸಂಪನ್ಮೂಲಗಳು, ಸಮಯ ಮತ್ತು ಕನಸು ಕಾಣಲು ಸ್ಥಳವನ್ನು ಹೊಂದಿರುತ್ತಾರೆ ಮತ್ತು ಕನಸುಗಳನ್ನು ಅನುಸರಿಸುತ್ತಾರೆ.

ಮೂಲಗಳು: 

೧) ಟ್ರೈಬಲ್ ರೂಟ್ಸ್ ಆ ಹಿಂದೂಯಿಸಂ – ಶಿವ್ ಕುಮಾರ್ ತಿವಾರಿ
೨)ಸವರ, ಎನ್ ಎತ್ನೋ ಗ್ರಾಫಿಕ್ ಪ್ರೊಫೈಲ್ –
೩)ವಿಮೆನ್ ಇನ್ ಅರ್ಲಿ ಇಂಡಿಯನ್ ಸೋಸೈ ಟೀಸ್ – ಸಂಪಾದನೆ – ಕುಂಕುಮ್ ರಾಯ್
೪)ದಿ ಸೌರಾಸ್ ಅಂಡ್ ದೇರ್ ಪನೋರಮಿಕ್ ಪೈಂಟಿಂಗ್ಸ್ – ಸಿ ಬಿ ಪಟೇಲ್
೫)ಇಮೇಜ್ – ಇಂಟರ್ನೆಟ್ ಕೃಪೆ
—————————————————-
ಅನು ರಾಮದಾಸ್ ರೌಂಡ್ ಟೇಬಲ್ ಇಂಡಿಯಾದ ಸಹ ಸಂಸ್ಥಾಪಕ ಸಂಪಾದಕರಾಗಿದ್ದಾರೆ
ಕನ್ನಡ ಅನುವಾದ : ಶ್ರೀಧರ ಅಘಲಯ (Sridhara Aghalaya) 
A painting for Banabhatta, ಈ ಇಂಗ್ಲಿಷ್ ಲೇಖನವು ಮೊದಲ ಬಾರಿಗೆ ಏಪ್ರಿಲ್ 2011 ರಲ್ಲಿ ‘WRITING CASTE ‘ ನಲ್ಲಿ ಪ್ರಕಟವಾಯಿತು, ಈಗ ಅದು ನಿಷ್ಕ್ರಿಯವಾಗಿದೆ. ನಂತರ Round Table India ದಲ್ಲಿ ಪ್ರಕಟವಾಯಿತು.